ಬನಹಟ್ಟಿ ನಗರದ ಮಂಗಳವಾರ ಪೇಟೆಯಲ್ಲಿ ಹೋಳಿ ಹಬ್ಬದ ಸಂಭ್ರಮದ ವೇಳೆಯೂ ಸಿಎಂ ಕುರ್ಚಿ ವಿವಾದ ಸದ್ದು ಮಾಡಿದೆ. ಕಾಮದೇವನ ಮೂರ್ತಿ ಬಳಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ಭಾವಚಿತ್ರಗಳನ್ನು ಇಟ್ಟು, ಸಿಎಂ ನಾನಾ ನೀನಾ? ಎಂದು ಬರೆದಿರೋದು ಎಲ್ಲರ ಗಮನ ಸೆಳೆದಿದೆ. ವರದಿಯ ಪ್ರಕಾರ, ಕಾಂಗ್ರೆಸ್ ಕಾರ್ಯಕರ್ತರು ಡಿಕೆ ಶಿವಕುಮಾರ್ ಪರವಾದ ಬರಹಗಳನ್ನು ಸಹ ಪ್ರದರ್ಶಿಸಿದ್ದಾರೆ.