ಮದ್ದೂರು ಕಾಂಗ್ರೆಸ್ ಶಾಸಕ ಕದಲೂರು ಉದಯ್ ರಾಜ್ಯದಲ್ಲಿ ಸಿಎಂ ಬದಲಾವಣೆಗೆ 1 ವಾರ ಡೆಡ್ಲೈನ್ ಕೊಟ್ಟಿದ್ದಾರೆ. ಒಂದು ವಾರದಲ್ಲಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ ಎಳೆಯಿರಿ. ಇಲ್ಲದಿದ್ರೆ ನಾವೇ ಹೈಕಮಾಂಡ್ ಭೇಟಿ ಮಾಡ್ತೇವೆ ಎಂದು ಅವರು ಹೇಳಿದ್ದಾರೆ. ಸಂಪುಟಕ್ಕೆ ಹೊಸ ಶಾಸಕರ ಸೇರ್ಪಡೆ, ಬದಲಾವಣೆ ಆಗಬಹುದು. ದಿನಾಂಕ ನಾವು ನಿಗದಿಪಡಿಸಲು ಆಗಲ್ಲ, ಹೈಕಮಾಂಡ್ ಮಾಡಬೇಕು. ಆದರೆ ಬದಲಾವಣೆ ಆಗುತ್ತೆ ಮತ್ತು ಆಗಬೇಕೆಂಬ ಆಶಾಭಾವನೆ ಇಟ್ಟುಕೊಂಡಿದ್ದೇವೆ.ಪಕ್ಷದ ಹೈಕಮಾಂಡ್ ಏನು ತೀರ್ಮಾನ ಮಾಡುತ್ತೋ ನೋಡೋಣ ಎಂದರವರು ಹೇಳಿದ್ದಾರೆ.