ಸಂಪುಟ ಪುನಾರಚನೆ ಮಾಡುವಂತೆ ದೆಹಲಿ ಯಾತ್ರೆ ಕೈಗೊಂಡಿರುವ ಕರ್ನಾಟಕ ಕಾಂಗ್ರೆಸ್ ಶಾಸಕರ ತಂಡ ಇಂದು ಏಪ್ರಿಲ್ 16)ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲರನ್ನ ಭೇಟಿಯಾದರು. ಮುಂದಿನ ಜವಾಬ್ದಾರಿಗಳ ಬಗ್ಗೆ ಸುರ್ಜೇವಾಲ ಮಾತಾಡಿದ್ದು, ನಾವು ಗಮನಕ್ಕೆ ತರಬೇಕಾದ ವಿಷಯಗಳನ್ನ ತಂದಿದ್ದೇವೆ. ನಮಗೆ ಈಗ ಒಂದು ರೀತಿಯ ಸಮಾಧಾನ ಸಿಕ್ಕಂತಾಗಿದೆ ಎಂದು ಟಿ.ಬಿ.ಜಯಚಂದ್ರ ಹೇಳಿದ್ದಾರೆ.