ಬೇಲೂರು ತಾಲ್ಲೂಕಿನ ತೊಳಲು ಗ್ರಾಮದಲ್ಲಿ 25ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಕಾಫಿ, ಅಡಿಕೆ ಮತ್ತು ನೀರಿನ ಪೈಪ್ಗಳನ್ನು ನಾಶಪಡಿಸಿ ಅಪಾರ ದಾಂಧಲೆ ನಡೆಸಿದೆ. ಟಿ.ಎಸ್.ಮಧುಕರ್ ತೋಟದಲ್ಲಿ ಭಾರಿ ಬೆಳೆ ಹಾನಿಯಾಗಿದ್ದು, ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ. ಸಮಸ್ಯೆಗೆ ಸರ್ಕಾರ ಸ್ಪಂದಿಸಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ.