ತುಮಕೂರಿನ ಕಾರ್ಯಕ್ರಮವೊಂದರಲ್ಲಿ ಗೃಹಸಚಿವ ಡಾ.ಜಿ. ಪರಮೇಶ್ವರ್ ಅವರು ಸ್ಯಾಕ್ಸೊಫೋನ್ ವಾದಕ ಹರೀಶ್ ಅವರ 'ಭಾಗ್ಯದ ಲಕ್ಷ್ಮೀ ಬಾರಮ್ಮ' ವಾದನಕ್ಕೆ ತಾಳ ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಚಿವರ ಈ ಅಪರೂಪದ ಪ್ರಸಂಗ ಜನಮೆಚ್ಚುಗೆ ಗಳಿಸಿದ್ದು, ಸರಳತೆ ಮತ್ತು ಸಂಗೀತ ಪ್ರೀತಿಯನ್ನು ಬಿಂಬಿಸಿದೆ. ಈ ವಿಡಿಯೋ @Saxophone Harish ಖಾತೆಯಲ್ಲಿ ಹಂಚಲಾಗಿದೆ.