ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿ ಹತ್ತಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದೆ. ಚಾಮರಾಜನಗರ ಜಿಲ್ಲೆಯ ತಾಳವಾಡಿ, ತಿಗನಾರು ಗ್ರಾಮಗಳಿಗೆ ನುಗ್ಗಲು ಯತ್ನಿಸಿದ ಗಜಪಡೆಯನ್ನು ಸೋಲಾರ್ ಬೇಲಿ ತಡೆಯಿತು. ಸೋಲಾರ್ ಫೆನ್ಸಿಂಗ್ ಇದ್ದಿದ್ದರಿಂದ ಗ್ರಾಮಸ್ಥರು ಅಪಾಯದಿಂದ ಪಾರಾಗಿದ್ದಾರೆ. ಆನೆಗಳ ನಿರಂತರ ಓಡಾಟದಿಂದ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದ್ದು, ಅರಣ್ಯಾಧಿಕಾರಿಗಳು ಆನೆಗಳನ್ನು ಕಾಡಿಗೆ ಹಿಂದಿರುಗಿಸಲು ಹರಸಾಹಸ ಪಡುತ್ತಿದ್ದಾರೆ.