ಬೆಂಗಳೂರು ಹಾಗೂ ಮಂಗಳೂರು ಸೇರಿದಂತೆ ರಾಜ್ಯದ ಹಲವು ನಗರಗಳಲ್ಲಿ ಆಟೋ ಎಲ್ಪಿಜಿ ಗ್ಯಾಸ್ ತೀವ್ರ ಕೊರತೆ ಎದುರಾಗಿದೆ. ಬಹುತೇಕ ಬಂಕ್ಗಳಲ್ಲಿ "ನೋ ಸ್ಟಾಕ್" ಫಲಕಗಳಿದ್ದರೆ, ಲಭ್ಯವಿರುವ ಕೆಲವೇ ಬಂಕ್ಗಳಲ್ಲಿ ಆಟೋ ಚಾಲಕರು ಮಧ್ಯರಾತ್ರಿಯಿಂದಲೇ 4 ಕಿ.ಮೀ ಉದ್ದಕ್ಕೂ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಇದರಿಂದ ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ತಮ್ಮ ದೈನಂದಿನ ಜೀವನಕ್ಕೆ ತೊಂದರೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.