ದಕ್ಷಿಣ ಕನ್ನಡದಲ್ಲಿ ಯಕ್ಷಗಾನವು ಮಹತ್ವದ ಕಲೆಯಾಗಿದೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯ 'ದೇವಿ ಮಹಾತ್ಮೆ ಪ್ರಸಂಗ' ಜನಪ್ರಿಯ. ಇತ್ತೀಚೆಗೆ ಬಿ.ಸಿ.ರೋಡಿನ ಮೊಡಂಕಾಪುವಿನಲ್ಲಿ ನಡೆದ 6ನೇ ಮೇಳದ ಯಕ್ಷಗಾನದಲ್ಲಿ, ದೇವಿಯ ಭುಜದ ಮೇಲೆ ಹಕ್ಕಿಯೊಂದು ಕುಳಿತಿತ್ತು. ಈ ಅದ್ಭುತ ದೃಶ್ಯದ ವಿಡಿಯೋ ವೈರಲ್ ಆಗಿದೆ.