ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಬಳಿಯ ನಾರಾಯಣಪುರ ಜಲಾಶಯದ ಎಡದಂಡೆ ಮುಖ್ಯ ಕಾಲುವೆಗೆ ಬಿದ್ದ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಸಾರ್ವಜನಿಕರು ಸಮಯ ಪ್ರಜ್ಞೆಯಿಂದ ರಕ್ಷಿಸಿದ್ದಾರೆ. ಸ್ಥಳೀಯರು ಕಾಲುವೆಗೆ ಹಾರಿ ಮಹಿಳೆಯನ್ನು ಪಾರುಮಾಡಿದ್ದು, ಇದು ಕೆಂಭಾವಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ. ಮಹಿಳೆ ಈ ಹಿಂದೆಯೂ ಒಂದೆರಡು ಬಾರಿ ಕಾಲುವೆಗೆ ಹಾರಿದ್ದರು.