ಕೇರಳ ಸಿಎಂ ವಿ. ಡಿ. ಸತೀಶನ್ ಅವರು ಕಂಟೈನರ್ ರಸ್ತೆಯಲ್ಲಿ ನಡೆದ ಸಡನ್ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನೊಬ್ಬನನ್ನು ಕಂಡು, ತಮ್ಮ ಬೆಂಗಾವಲು ವಾಹನಗಳ ಸಾಲನ್ನು ತಕ್ಷಣವೇ ತಡೆದು, ಆ ವಾಹನದಲ್ಲಿ ಆ ಯುವಕನನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ. ಕಂಟೈನರ್ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ ಯುವಕನೊಬ್ಬ ಅಪಘಾತಕ್ಕೊಳಗಾಗಿ ತೀವ್ರ ಗಾಯಗೊಂಡು ಬಿದ್ದಿರುವುದನ್ನು ಸಿಎಂ ಸತೀಶನ್ ಗಮನಿಸಿದ್ದಾರೆ. ತಕ್ಷಣವೇ ತಮ್ಮ ವಾಹನವನ್ನು ನಿಲ್ಲಿಸಿದ ಅವರು, ವಿಳಂಬ ಮಾಡದೆ ತಮ್ಮ ಕಾನ್ವಾಯ್ನಲ್ಲಿದ್ದ ಪೈಲಟ್ ವಾಹನದಲ್ಲೇ ಗಾಯಾಳು ಯುವಕನನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯುವಂತೆ ಸಿಬ್ಬಂದಿಗೆ ನಿರ್ದೇಶನ ನೀಡಿದರು.