ಖಟ್ಟಾ ಮೀಠಾ ಕಿವಿ ಸಲಾಡ್ (ಹುಳಿ- ಸಿಹಿ ಕಿವಿ ಸಲಾಡ್) ಒಂದು ರುಚಿಕರವಾದ ಮತ್ತು ಪೌಷ್ಟಿಕಾಂಶಯುಕ್ತ ಸಲಾಡ್ ಆಗಿದೆ. ಇದನ್ನು ಕಿವಿ, ಮಾವಿನಹಣ್ಣು, ಸೌತೆಕಾಯಿ, ಈರುಳ್ಳಿ ಬಳಸಿ ಮಾಡಬಹುದು. ಬಳಿಕ ಜೇನುತುಪ್ಪ ಅಥವಾ ನಿಂಬೆ ರಸದ ಡ್ರೆಸ್ಸಿಂಗ್ನೊಂದಿಗೆ ಪೂರ್ಣಗೊಳಿಸಬಹುದು. ಇದು ತ್ವರಿತವಾಗಿ ತಯಾರಿಸಬಹುದಾದ, ಆರೋಗ್ಯಕರ ಮತ್ತು ವಿಶಿಷ್ಟವಾದ ರುಚಿಯನ್ನು ನೀಡುವ ಹಣ್ಣು- ತರಕಾರಿ ಮಿಶ್ರಣವಾಗಿರುವುದರಿಂದ ಆರೋಗ್ಯಕ್ಕೂ ಕೂಡ ಒಳ್ಳೆಯದು. ನಿಮಗೆ ಬೇಕಾದಲ್ಲಿ ಹೆಚ್ಚಿನ ರುಚಿಗಾಗಿ ಪುದೀನಾ ಎಲೆಗಳು, ನೆನೆಸಿದ ಚಿಯಾ ಬೀಜಗಳು ಅಥವಾ ವಾಲ್ನಟ್ಗಳನ್ನು ಸೇರಿಸಬಹುದು. ಕಿವಿ ಹುಳಿಯಾಗಿದ್ದರೆ, ಸ್ವಲ್ಪ ಹೆಚ್ಚು ಜೇನುತುಪ್ಪ ಅಥವಾ ಸಕ್ಕರೆ ಬಳಸಿ. ಹಾಗಿದ್ರೆ ಇನ್ನೇಕೆ ತಡ ಒಮ್ಮೆ ಕಿವಿ ಸಲಾಡ್ ಮಾಡಿ ನೋಡಿ. ಈ ವಿಡಿಯೋವನ್ನು eatwithaishwarya ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.