ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಹಾವಿನ ವಿಡಿಯೋವೊಂದು ನೆಟಿಜನ್ಗಳನ್ನು ಆಶ್ಚರ್ಯಚಕಿತಗೊಳಿಸಿದೆ. ಹಾವು ತೂಗಾಡುತ್ತಾ ಸಮತೋಲನ ಕಳೆದುಕೊಳ್ಳುತ್ತಿರುವುದನ್ನು ನೋಡಿ, ಹಲವರು ಅದು ಮದ್ಯ ಸೇವಿಸಿರಬೇಕು ಎಂದು ತಮಾಷೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಆದರೆ, ತಜ್ಞರ ಪ್ರಕಾರ, ಗಾಯಗಳು, ನಿರ್ಜಲೀಕರಣ, ವಿಷ ಅಥವಾ ನರವೈಜ್ಞಾನಿಕ ಸಮಸ್ಯೆಗಳು ಈ ವಿಚಿತ್ರ ವರ್ತನೆಗೆ ಕಾರಣವಾಗಿರಬಹುದು. ಈ ವೈರಲ್ ವಿಡಿಯೋವನ್ನು @Mountain4u ಎಂಬ ಬಳಕೆದಾರರು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.