ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಬೆಸಗೂರು ಗ್ರಾಮದಲ್ಲಿ ಕಳೆದ 10 ದಿನಗಳಲ್ಲಿ 7 ಹಸುಗಳನ್ನು ಕೊಂದಿದ್ದ ಹುಲಿಯನ್ನು ಅರಣ್ಯ ಇಲಾಖೆ ಯಶಸ್ವಿಯಾಗಿ ಸೆರೆಹಿಡಿದಿದೆ. ಎಸಿಎಫ್ ಗೋಪಾಲ್ ನೇತೃತ್ವದಲ್ಲಿ, ಭೀಮ ಮತ್ತು ಮಹೇಂದ್ರ ಸಾಕಾನೆಗಳನ್ನು ಬಳಸಿ ಅರವಳಿಕೆ ಮದ್ದು ನೀಡಿ ಕಾರ್ಯಾಚರಣೆ ನಡೆಸಲಾಯಿತು. ಪಶುವೈದ್ಯ ರಮೇಶ್ ಹುಲಿಯ ಆರೋಗ್ಯ ತಪಾಸಣೆ ನಡೆಸಿದ್ದು, ಪುನರ್ವಸತಿ ಬಗ್ಗೆ ನಾಳೆ ತೀರ್ಮಾನ ಕೈಗೊಳ್ಳಲಾಗುವುದು.