ಕೋಲಾರದ ಹೊರವಲಯದ ಪ್ರಸಿದ್ಧ ಅಂತರಗಂಗೆ ಬೆಟ್ಟದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಬಂಡೆ ಮೇಲೆ ಕುಳಿತಿದ್ದ ದೃಶ್ಯವನ್ನು ವಾಯುವಿಹಾರಿ ತೇಜಸ್ ಹಾಗೂ ಸ್ನೇಹಿತರು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಇತ್ತೀಚೆಗಷ್ಟೇ ಚಿನ್ನಾಪುರದಲ್ಲಿ 12 ಕುರಿಗಳನ್ನು ಕಚ್ಚಿ ಕೊಂದಿದ್ದ ಈ ಚಿರತೆಯ ಸರಣಿ ದಾಳಿಗಳಿಂದ ಗ್ರಾಮಸ್ಥರು ತೀವ್ರ ಭಯಭೀತರಾಗಿದ್ದಾರೆ. ಪ್ರವಾಸಿಗರು ಹಾಗೂ ಸಾರ್ವಜನಿಕರ ರಕ್ಷಣೆಗಾಗಿ ಅರಣ್ಯ ಇಲಾಖೆಯು ತಕ್ಷಣವೇ ಬೋನು ಇಟ್ಟು ಚಿರತೆಯನ್ನು ಸೆರೆಹಿಡಿದು, ಬೇರೆಡೆಗೆ ಸ್ಥಳಾಂತರಿಸಬೇಕೆಂದು ಸಾರ್ವಜನಿಕರು ತೀವ್ರವಾಗಿ ಒತ್ತಾಯಿಸಿದ್ದಾರೆ.