ಕೋಲಾರದ ಕೊಂಡರಾಜನಹಳ್ಳಿ ಗೇಟ್ ಬಳಿ ಇಂದು ಬೆಳಗಿನ ಜಾವ ಸರಣಿ ಅಪಘಾತ ಸಂಭವಿಸಿದೆ. ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ವಿಸ್ಟ್ರಾನ್ ಸಂಸ್ಥೆಯ ಬಸ್ ಡಿಕ್ಕಿ ಹೊಡೆದ ನಂತರ, ಬಸ್ ಹಿಂದೆ ಬರುತ್ತಿದ್ದ ಎರ್ಟಿಗಾ ಮತ್ತು ಶಿಫ್ಟ್ ಕಾರುಗಳು ಸಹ ಡಿಕ್ಕಿ ಹೊಡೆದಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.