ಕೋಲಾರದ ಬಂಗಾರಪೇಟೆ ವೃತ್ತದ ಹಳೆ ಹೆಂಚಿನ ಕಾರ್ಖಾನೆ ಬಡಾವಣೆಯ ಮನೆಯೊಂದರಲ್ಲಿ ಹಾಸಿಗೆ ಅಡಿಯಲ್ಲಿ ಅಡಗಿದ್ದ ವಿಷಪೂರಿತ ನಾಗರಹಾವನ್ನು ಉರಗ ರಕ್ಷಕ ನಾಗರಾಜ್ ಅವರು ಯಶಸ್ವಿಯಾಗಿ ರಕ್ಷಿಸಿದ್ದಾರೆ. ರತನ್ ಲೋಕ್ ಸ್ಟೀಲ್ ಅಂಗಡಿ ಮಾಲೀಕರ ಮನೆಯ ಬೆಡ್ ಅಡಿಯಲ್ಲಿ ಹಾವು ಕಂಡು ಕುಟುಂಬಸ್ಥರು ಆತಂಕಗೊಂಡಿದ್ದರು. ಸದ್ಯ ಹಾವನ್ನು ರಕ್ಷಿಸಿ ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.