ಕೊಪ್ಪಳ ತಾಲೂಕಿನ ಅಚಲಾಪುರ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲುಗಣಿಗಾರಿಕೆಯಿಂದಾಗಿ ವನ್ಯಜೀವಿಗಳ ಆವಾಸಸ್ಥಾನ ಸಂಪೂರ್ಣ ನಲುಗಿದೆ. ಗಣಿಗಾರಿಕೆಯ ಭೀತಿಯಿಂದ ಬೆಟ್ಟಗಳನ್ನು ಬಿಟ್ಟು ಕರಡಿಗಳು ಹಳ್ಳಿಗಳತ್ತ ಬರುತ್ತಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಇದನ್ನು ತಡೆಯಲು ಹೋದ ಅರಣ್ಯ ಇಲಾಖೆ ಅಧಿಕಾರಿಗಳನ್ನೇ ದಂಧೆಕೋರರು ಕೂಡಿಹಾಕುತ್ತಿರುವುದು ಗಂಭೀರ ಆರೋಪಕ್ಕೆ ಕಾರಣವಾಗಿದೆ.