ಕೊಪ್ಪಳದಲ್ಲಿ ಹಿಂದೂ-ಮುಸ್ಲಿಂ ಪ್ರೇಮ ಜೋಡಿಯೊಂದು ವಿವಾಹವಾದ ನಂತರ ತಮ್ಮ ಕುಟುಂಬಗಳಿಂದ ರಕ್ಷಣೆ ಕೋರಿ ಎಸ್ಪಿ ಕಚೇರಿ ಮೆಟ್ಟಿಲೇರಿದೆ. ಕೇಶವ್ ಮತ್ತು ತಸ್ಲೀಮಾ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದು, ಜಾತಿ ಮತ್ತು ಧರ್ಮದ ಭಿನ್ನಾಭಿಪ್ರಾಯಗಳಿಂದ ಭವಿಷ್ಯದಲ್ಲಿ ತೊಂದರೆ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ತಮ್ಮ ಜೀವಕ್ಕೆ ರಕ್ಷಣೆ ನೀಡುವಂತೆ ಪೊಲೀಸ್ ಇಲಾಖೆಯನ್ನು ಕೋರಿದ್ದಾರೆ.