ಕೊಪ್ಪಳದ ಅಭಿನವ ಗವಿ ಸಿದ್ದೇಶ್ವರ ಶ್ರೀಗಳು ದಾಸೋಹ ಮುಗಿದ ಬಳಿಕ ಸ್ವತಃ ಟೇಬಲ್ಗಳನ್ನು ಸ್ವಚ್ಛಗೊಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕೆಲಸಗಾರರಂತೆ ತಾವೇ ಬಟ್ಟೆಯಿಂದ ಟೇಬಲ್ಗಳನ್ನು ಕ್ಲೀನ್ ಮಾಡುವ ಮೂಲಕ ಶ್ರೀಗಳು ತಮ್ಮ ಸರಳತೆಯನ್ನು ಎತ್ತಿಹಿಡಿದಿದ್ದಾರೆ. ಶ್ರೀಗಳ ಈ ಕಾರ್ಯ ಭಕ್ತರಿಗೆ ಸ್ಪೂರ್ತಿಯಾಗಿದ್ದು, ಅವರ ಮಹಾನ್ ವ್ಯಕ್ತಿತ್ವಕ್ಕೆ ಇದು ಸಾಕ್ಷಿಯಾಗಿದೆ.