101 ಕೆಜಿ ತೂಕದ ಚೀಲ ಹೊತ್ತು ಯುವಕನೋರ್ವ ಕೊಪ್ಪಳದ ಅಂಜನಾದ್ರಿ ಬೆಟ್ಟ ಹತ್ತಿ ಹರಕೆ ತೀರಿಸಿದ್ದಾನೆ. ಬಾಗಲಕೋಟೆಯ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದ ಬಳಿಯ ಬಿಸಲದಿನ್ನಿಯ ಗ್ರಾಮದ ನವೀನ ಭರಮಗೌಡ, ಜೋಳದ ಮೂಟೆ ಹೊತ್ತು 575 ಮೆಟ್ಟಿಲು ಏರಿದ್ದಾರೆ. ಕೂಡಲಸಂಗಮದಲ್ಲಿ ನಡೆದ ಭಾರ ಎತ್ತುವ ಸ್ಪರ್ಧೆಯಲ್ಲಿ ಜಯಗಳಿಸಿದರೆ ಈ ರೀತಿ ಹರಕೆ ತೀರಸೋದಾಗಿ ನವೀನ ಆಂಜನೇಯನಲ್ಲಿ ಪ್ರಾರ್ಥಿಸಿದ್ದರು ಎನ್ನಲಾಗಿದೆ.