ಕೋಸಂಬರಿ ಕರ್ನಾಟಕದ ಸಾಂಪ್ರದಾಯಿಕ, ಆರೋಗ್ಯಕರ ಮತ್ತು ರುಚಿಕರವಾದ ಸಲಾಡ್ ಎಂಬುದು ತಿಳಿದ ವಿಚಾರ. ಬೇಸಿಗೆಯಲ್ಲಿ ಇದು ತಂಪು ನೀಡುವ ಆಹಾರಗಳಲ್ಲಿ ಒಂದು. ಇದನ್ನು ಸಾಮಾನ್ಯವಾಗಿ ಹೆಸರು ಬೇಳೆ, ಸೌತೆಕಾಯಿ, ಕ್ಯಾರೆಟ್, ತೆಂಗಿನತುರಿ, ನಿಂಬೆ ರಸ ಮತ್ತು ಸಾಸಿವೆ ಒಗ್ಗರಣೆಯೊಂದಿಗೆ ತಯಾರಿಸಲಾಗುತ್ತದೆ. ಆರೋಗ್ಯ ಕಾಪಾಡಲು ಇದನ್ನು ನೀವು ತಿಂಗಳಲ್ಲಿ ಒಮ್ಮೆಯಾದರೂ ಮಾಡಿ ಸವಿಯಲೇಬೇಕು. ಇದನ್ನು ಸಿಂಪಲ್ ಆಗಿ ಮಾಡುವ ರೆಸಿಪಿಯನ್ನು iampurvishah ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ರೆ ಇನ್ನೇಕೆ ತಡ ಒಮ್ಮೆ ಟ್ರೈ ಮಾಡಿ ನೋಡಿ.