ಬೆಂಗಳೂರಿನ ಕೆ.ಆರ್.ಮಾರುಕಟ್ಟೆಯಲ್ಲಿ ಫುಟ್ಪಾತ್ ತೆರವು ಕಾರ್ಯಾಚರಣೆ 37ನೇ ದಿನಕ್ಕೆ ಕಾಲಿಟ್ಟಿದೆ. ಜೆಸಿಬಿ ಬಳಸಿ ಫ್ಲೈಓವರ್ ಕೆಳಗಿರುವ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಲಾಗುತ್ತಿದೆ. ಸಾರ್ವಜನಿಕರಿಗೆ ನಿನ್ನೆ ಮೊನ್ನೆಯಿಂದಲೇ ಎಚ್ಚರಿಕೆ ನೀಡಲಾಗಿದ್ದು, ತಮ್ಮ ವಸ್ತುಗಳನ್ನು ತೆರವುಗೊಳಿಸಲು ಸೂಚಿಸಲಾಗಿದೆ. ರಸ್ತೆ ಬದಿಯ ಮಾರಾಟಗಾರರು ಮತ್ತು ಒತ್ತುವರಿದಾರರಿಗೆ ತಮ್ಮ ವಸ್ತುಗಳನ್ನು ಸ್ಥಳಾಂತರಿಸಲು ಅಂತಿಮ ಗಡುವು ನೀಡಲಾಗಿದೆ.