ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಕೃಷ್ಣಾ, ವೇದಗಂಗಾ, ದೂದಗಂಗಾ ಒಳಹರಿವಿನ ಪ್ರಮಾಣದಲ್ಲಿ ಮತ್ತೆ ಹೆಚ್ಚಳವಾಗಿದೆ. ಕೃಷ್ಣಾ ನದಿಗೆ ಕಲ್ಲೋಳ ಬ್ಯಾರೇಜ್ ಬಳಿ 1ಲಕ್ಷ 40 ಸಾವಿರ ಕ್ಯೂಸೆಕ್ನಷ್ಟು ಒಳಹರಿವು ಇದ್ದು, ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನಲ್ಲಿ 6 ಕೆಳಹಂತದ ಸೇತುವೆಗಳು ಹಾಗೂ ರಾಯಬಾಗ ತಾಲೂಕಿನ ಒಂದು ಸಂಪರ್ಕ ಸೆತುವ ಜಲಾವೃತಗೊಂಡಿವೆ.