ರಸ್ತೆ ಮಧ್ಯೆ ಬಸ್ಗೆ ಅಡ್ಡನಿಂತ ಒಂಟಿ ಸಲಗವೊಂದು ಸುಮಾರು ಅರ್ಧಗಂಟೆಗಳ ಕಾಲ KSRTC ಬಸ್ ಸಂಚಾರಕ್ಕೆ ಅಡಚಣೆ ಉಂಟು ಮಾಡಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಕಾಡುಶಿವನಹಳ್ಳಿ ಗ್ರಾಮದ ಬಳಿ ನಡೆದಿದೆ. ಬೆಳ್ಳಂ ಬೆಳಿಗ್ಗೆ ಆನೆ ಬಸ್ ಅಡ್ಡಗಟ್ಟಿದ ಪರಿಣಾಮ ಪ್ರಯಾಣಿಕರು ಕೆಲ ಕಾಲ ಆತಂಕಕ್ಕೆ ಒಳಗಾಗಿದ್ದಾರೆ. ಬಳಿಕ ಆನೆ ಕಾಡಿನತ್ತ ಹೊರಟ ಪರಿಣಾಮ ದಾರಿ ತೆರವಾಗಿದ್ದು, ಬೆಂಗಳೂರಿನತ್ತ ಬಸ್ ಸಂಚಾರ ಆರಂಭಿಸಿದ ಪ್ರಸಂಗ ನಡೆದಿದೆ.