ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನಾಡ ಪರಿಸರದ ಮೈದಾನದಲ್ಲಿ ಏಕಾಏಕಿ ಸುಂಟರಗಾಳಿ ಕಾಣಿಸಿಕೊಂಡಿದ್ದು ಆಘಾತಕಾರಿ ದೃಶ್ಯ ಕಂಡು ಸಾರ್ವಜನಿಕರು ಹೌಹಾರಿದ್ದಾರೆ. ನಾಡಗುಡ್ಡೆ ಅಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಮೈದಾನದಲ್ಲಿ ಸುರಳಿ ಸುರುಳಿಯಾಗಿ ಸುತ್ತಿದ ಗಾಳಿ ಕೆಲ ಕಅಲ ಆಂತಕ ಸೃಷ್ಟಿಸಿದ್ದು, ಅದೃಷ್ಟವಶಾತ್ ಯಾವುದೇ ಅಹಿತಕರ ಘಟನೆ ನಡೆದಿಲ್ಲ.