ಉತ್ತರಾಖಂಡದ ಬಾಗೇಶ್ವರ್ ಜಿಲ್ಲೆಯ ಕಪ್ಕೋಟ್ ಬ್ಲಾಕ್ ವ್ಯಾಪ್ತಿಯ ಮೌಂಧುರಾ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಭೀಕರ ಭೂಕುಸಿತ ಸಂಭವಿಸಿದೆ. ಹಿಮಾಲಯದ ತಪ್ಪಲಿನ ಈ ಗುಡ್ಡಗಾಡು ಪ್ರದೇಶದಲ್ಲಿ ಪ್ರಕೃತಿಯ ವಿಕೋಪಕ್ಕೆ ಜನಜೀವನ ತತ್ತರಿಸಿದೆ. ಮೌಂಧುರಾ ಹಳ್ಳಿಯ ಬಳಿ ಗುಡ್ಡದ ಬಹುದೊಡ್ಡ ಭಾಗ ಕುಸಿದು ಬಿದ್ದಿದ್ದರಿಂದ ರಸ್ತೆಯು ಸಂಪೂರ್ಣವಾಗಿ ಮುಚ್ಚಿಹೋಗಿದೆ. ಬೃಹತ್ ಪ್ರಮಾಣದ ಮಣ್ಣು ಮತ್ತು ಕಲ್ಲುಗಳು ಗುಡ್ಡದಿಂದ ಉರುಳಿ ಬಂದಿರುವುದರಿಂದ ತಗ್ಗು ಪ್ರದೇಶದಲ್ಲಿದ್ದ ಕೃಷಿ ಭೂಮಿ ಹಾಗೂ ಬೆಳೆಗಳು ನಾಶವಾಗಿವೆ.