ತಾಜಾ ನಿಂಬೆ, ಕ್ಯಾಬಿಜ್, ಸೌತೆಕಾಯಿ, ಕ್ಯಾರೆಟ್ ಹಾಕಿ ಈ ರೀತಿ ಸಲಾಡ್ ಮಾಡಿದಲ್ಲಿ ಯಾರೇ ಆಗಲಿ ಸಲಾಡ್ ತಿಂದೆ ತಿನ್ನುತ್ತಾರೆ. ಮಕ್ಕಳಿಂದ ದೊಡ್ಡವರ ವರೆಗೆ ಯಾರಿಗೆ ಆಗಲಿ ಇದನ್ನು ಮಾಡಿಕೊಡಬಹುದು. ಇದೊಂದು ಆರೋಗ್ಯಕರ ಆಹಾರವಾಗಿದ್ದು, ತ್ವರಿತವಾಗಿ ಮತ್ತು ರುಚಿಕರವಾಗಿ ಮಾಡಬಹುದಾಗಿದೆ. ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು ಅಷ್ಟೇ ಅಲ್ಲ ಯಾವ ಸಮಯದಲ್ಲಿಯೂ ತಟ್ ಅಂತ ಮಾಡಿ ಸವಿಯಬಹುದಾಗಿದೆ. ಕೇವಲ 10 ನಿಮಿಷಗಳಲ್ಲಿ ಸಿದ್ಧವಾಗುತ್ತದೆ. ಈ ರೆಸಿಪಿ ವಿಡಿಯೋವನ್ನು oliveandtthyme ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇನ್ನೇಕೆ ತಡ ಒಮ್ಮೆ ನೀವು ಕೂಡ ಟ್ರೈ ಮಾಡಿ ನೋಡಿ.