ಚಿಕ್ಕಬಳ್ಳಾಪುರದ ಗುಡಿಬಂಡೆ ಪೊಲೀಸ್ ಠಾಣೆ ಬಳಿ ಅಚ್ಚರಿಯ ಘಟನೆ ನಡೆದಿದೆ. ಕಾಡಿನಿಂದ ನಾಡಿಗೆ ಬಂದ ಚಿರತೆ ಮರಿಯೊಂದು ಪೊಲೀಸ್ ಕಾರಿನಲ್ಲಿ ಆಸರೆ ಪಡೆದಿದೆ. ಸೀಜ್ ಮಾಡಿದ ವಾಹನದಲ್ಲಿ ಮರಿಯನ್ನು ಕಂಡು ಪೊಲೀಸರು ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ರಕ್ಷಣೆಗೆ ಮುಂದಾಗಿದ್ದಾರೆ. ಈ ಅಪರೂಪದ ದೃಶ್ಯ ನೋಡಲು ಸ್ಥಳೀಯರು ಮುಗಿಬಿದ್ದಿದ್ದರು.