ನವಿಲು ಬೇಟೆಯಾಡಲು ಹೋಗಿ ಚಿರತೆ ಬಾವಿಗೆ ಬಿದ್ದ ಘಟನೆ ತುಮಕೂರಿನ ಗುಬ್ಬಿ ತಾಲೂಕಿನ ದೊಡ್ಡಗುಣಿಯಲ್ಲಿ ನಡೆದಿದೆ. ಕೃಷ್ಣಪ್ಪ ಎನ್ನುವವರಿಗೆ ಸೇರಿದ ತೋಟದ ಬಾವಿಗೆ ಚಿರತೆ ಬಿದ್ದ ಮಾಹಿತಿ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಏಣಿ ಇರಿಸಿ ಚಿರತೆಯನ್ನು ಮೇಲಕ್ಕೆತ್ತಿದ್ದಾರೆ. ಮೇಲೆ ಬಂದ ಚಿರತೆ ಬಲೆಗೆ ಸಿಗದೇ ಪರಾರಿಯಾಗಿದೆ. ಚಿರತೆ ಜೊತೆಗೆ ಬಾವಿಗೆ ಬಿದ್ದಿದ್ದ ನವಿಲಿನ ರಕ್ಷಣೆ ಮಾಡಲಾಗಿದೆ. ಸದ್ಯ ಚಿರತೆ ಬಾವಿಯಲ್ಲಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.