ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದ ಸುತ್ತಾ ಮುತ್ತ ಮೂರು ತಿಂಗಳಿಂದ ಅರಣ್ಯಾಧಿಕಾರಿಗಳ ನಿದ್ದೆಗೆಡಿಸಿದ್ದ ಚಾಲಾಕಿ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ. ಜಾನುವಾರುಗಳ ಮೇಲೆ ದಾಳಿ ನಡೆಸುತ್ತಾ, ಮೂರು ಬಾರಿ ಬೋನಿನಿಂದ ತಪ್ಪಿಸಿಕೊಂಡಿದ್ದ ಈ 4 ವರ್ಷದ ಹೆಣ್ಣು ಚಿರತೆಯನ್ನು ರಾಘನ್ ಜಮೀನಿನಲ್ಲಿ ಸೆರೆ ಹಿಡಿಯಲಾಗಿದೆ. ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.