ಹಾವೇರಿಯ ರಟ್ಟಿಹಳ್ಳಿ ತಾಲೂಕಿನ ಕಡೂರು ಗುಡ್ಡದ ಸಮೀಪದ ರೈತರ ಜಮೀನಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ. ಕಳೆದ 1 ತಿಂಗಳಿನಿಂದ ನಿರಂತರವಾಗಿ ಕಾಣಿಸಿಕೊಂಡದ್ದ ಚಿರತೆಯಿಂದ ಭಯಗೊಂಡಿದ್ದ ಜನರು ಕೃಷಿ ಕೆಲಸಕ್ಕೆ ಹೋಗಲೂ ಹಿಂದೇಟು ಹಾಕುತ್ತಿದ್ದರು. ಆದರೆ ಈಗ ಚಿರತೆ ಸೆರೆಯಿಂದ ಕಡೂರು ಗ್ರಾಮದ ಸುತ್ತಮುತ್ತಲಿನ ಜನರು ನಿಟ್ಟುಸಿರು ಬಿಟ್ಟಿದ್ದಾರೆ.