ಕಲಬುರಗಿಯಲ್ಲಿ ಶುಕ್ರವಾರ ರಾತ್ರಿ ಭಾರಿ ಮಳೆಯಾಗಿದ್ದು, ಹರಸೂರು ಗ್ರಾಮದ ಜೈನ ಮಂದಿರ ಬಳಿ ಸಿಡಿಲಿನ ಹೊಡೆತಕ್ಕೆ ತೆಂಗಿನ ಮರವೊಂದು ಹೊತ್ತಿ ಉರಿದಿದೆ. ತೆಂಗಿನ ಮರದ ಬಳಿಯಲ್ಲಿದ್ದ ಮನೆಯವರು ಹೊರಬಂದು ತಪ್ಪಿಸಿಕೊಂಡಿದ್ದಾರೆ. ಹೊತ್ತಿ ಉರಿದ ತೆಂಗಿನ ಮರದ ಕೆಂಡ ಮನೆ ಮೇಲ್ಛಾವಣಿ ಮೇಲೆ ಬಿದ್ದಿದ್ದು, ಅನಾಹುತ ಸ್ವಲ್ಪದರಲ್ಲೇ ತಪ್ಪಿದೆ.