ವೈರಲ್ ಆಗಿರುವ ವಿಡಿಯೋದಲ್ಲಿ ಕಾಡಿನಲ್ಲಿ ಸಫಾರಿ ಮಾಡುವಾಗ ಸಿಂಹವೊಂದು ಇದ್ದಕ್ಕಿದ್ದಂತೆ ಪ್ರವಾಸಿಗರ ಜೀಪಿನೊಳಗೆ ನುಗ್ಗುತ್ತದೆ. ಈ ವೇಳೆ ಅದು ಚಾಲಕನ ಪಕ್ಕ ನಿಂತು ಆತನನ್ನು ಮೂಸುತ್ತದೆ. ಆತ ಅಲುಗಾಡದೆ ಕೂರುತ್ತಾನೆ. ನಂತರ ಆ ಸಿಂಹ ತನ್ನಷ್ಟಕ್ಕೆ ಇಳಿದುಹೋಗುತ್ತದೆ.