ಮಳೆಯಿಂದ ನೀರು ನಿಂತಿತ್ತು. ಅದರ ಪಕ್ಕದಲ್ಲೇ ಶಾಲಾ ಬಸ್ ನಿಂತಿತ್ತು. ಆ ಬಸ್ನಿಂದ ಇಳಿದ ಪುಟ್ಟ ಬಾಲಕಿ ಕೆಸರು ನೀರಿನಲ್ಲಿ ಹಾರಿ ಕುಣಿದು ಕುಪ್ಪಳಿಸಿ ಎಂಜಾಯ್ ಮಾಡಿದ್ದಾಳೆ. ಈ ವಿಡಿಯೋ ವೈರಲ್ ಆಗಿದೆ. ಆಗ ಬಸ್ನಿಂದ ಇಳಿದ ದೊಡ್ಡ ಬಾಲಕ ಆಕೆಯನ್ನು ಹಿಡಿದು ನಿಲ್ಲಿಸಲು ಪ್ರಯತ್ನಿಸಿದ್ದಾನೆ. ಈ ವಿಡಿಯೋ ಬಾಲ್ಯದ ನೆನಪುಗಳನ್ನು ಮರಳಿ ತಂದಿತು.