ಯುದ್ಧದ ಎಫೆಕ್ಟ್ ಹಿನ್ನೆಲೆ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಮಾಡಲು ಕಡೂರು ಪಟ್ಟಣದ ಹೆಚ್ಪಿ ಗ್ಯಾಸ್ ಏಜೆನ್ಸಿ ಕಚೇರಿ ಬಳಿ ಸಾರ್ವಜನಿಕರು ಸಾಲುಗಟ್ಟಿ ನಿಂತ ದೃಶ್ಯ ಕಂಡುಬಂದಿದೆ. ಆನ್ಲೈನ್ನಲ್ಲಿ ಬುಕ್ಕಿಂಗ್ ಆಗದ ಹಿನ್ನೆಲೆ ನೇರವಾಗಿ ಕಚೇರಿಗೇ ಜನರು ಆಗಮಿಸುತ್ತಿದ್ದು, ಮುಂದೆ ಸಿಲಿಂಡರ್ಗಳು ಸಿಗದಿದ್ದರೆ ಗತಿ ಏನು ಎಂಬ ಆತಂಕವೇ ಈ ಪರಿಸ್ಥಿತಿ ನಿರ್ಮಾಣಕ್ಕೆ ಕಾರಣ ಎನ್ನಲಾಗಿದೆ.