ಸಾಲು ಸಾಲು ರಜೆ ಹಿನ್ನೆಲೆ ರಾಜಧಾನಿ ಬೆಂಗಳೂರಿನಿಂದ ಊರುಗಳತ್ತ ತೆರಳುತ್ತಿರುವವರ ಸಂಖ್ಯೆ ಹೆಚ್ಚಿದೆ. ಇಂದು ಮೇ 1 ಕಾರ್ಮಿಕ ದಿನಾಚರಣೆಯ ನಿಮಿತ್ತರ ರಜೆ ಇದ್ದರೆ, ನಾಳೆ ಮತ್ತು ನಾಡಿದ್ದು ವೀಕೆಂಡ್ ಹಿನ್ನೆಲೆ ಎರಡು ದಿನಗಳ ಕಾಲ ಹಾಲಿಡೇ ಇದೆ. ಒಟ್ಟಾರೆಯಾಗಿ ಸತತ 3 ದಿನಗಳ ಕಾಲ ಲಾಂಗ್ ವೀಕೆಂಡ್ ಸಿಕ್ಕಿರುವ ಕಾರಣಕ್ಕೆ ಬೆಂಗಳೂರಿಗರು ಹೆಚ್ಚಾಗಿ ಊರುಗಳತ್ತ, ಪ್ರವಾಸಕ್ಕೆ ತೆರಳುತ್ತಿರೋದು ಕಂಡುಬಂದಿದೆ. ಹೀಗಾಗಿ ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸಾಲುಗಟ್ಟಿ ನಿಂತಿರುವ ವಾಹನಗಳ ದೃಶ್ಯವನ್ನು ಪ್ರಯಾಣಿಕರೊಬ್ಬರು ಎಕ್ಸ್ ಪೋಸ್ಟ್ ಮಾಡಿ ಹಂಚಿಕೊಂಡಿದ್ದಾರೆ.