ಎಲ್ಪಿಜಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆಗಳಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿರುವ ಘಟನೆ ಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಮಾಟನಹಳ್ಳಿಯಲ್ಲಿ ನಡೆದಿದೆ. ಅಪಘಡದಲ್ಲಿ ವೆಂಕಟರಮಣಗೌಡ ಮತ್ತು ಸಣ್ಣತಿಮ್ಮೇಗೌಡ ಎಂಬುವರ ಮನೆಗಳಿಗೆ ಭಾರಿ ಹಾನಿಯಾಗಿದೆ. ಮನೆಯಲ್ಲಿದ್ದ ವಸ್ತುಗಳು, ನಗದು, ಆಭರಣ ಬೆಂಕಿಗಾಹುತಿಯಾಗಿವೆ. ಅದೃಷ್ಟವಶಾತ್ ಕುಟುಂಬಸ್ಥರು ಬಚಾವ್ ಆಗಿದ್ದಾರೆ. ಸಂಗ್ರಹಿಸಿಡಲಾಗಿದ್ದ ಅಪಾರ ಪ್ರಮಾಣದ ಕೊಬ್ಬರಿಯೂ ಸುಟ್ಟು ಕರಕಲಾಗಿದ್ದು, ಎರಡು ಮನೆಗಳಿಗೆ ಅಗ್ನಿಶಾಮಕ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.