ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಕ್ರಿಸ್ಮಸ್ ಹಬ್ಬದಂದು ತೊಂದರೆ ಕೊಡುತ್ತಿದ್ದ ಯುವಕನಿಗೆ ಪೊಲೀಸ್ ಅಧಿಕಾರಿಯೊಬ್ಬರು ಎಂದಿಗೂ ಮರೆಯಲಾಗದ ಪಾಠ ಕಲಿಸಿದರು. ಕ್ಯಾಥೆಡ್ರಲ್ ಚರ್ಚ್ ಹೊರಗೆ ಜೋರಾಗಿ ಪೀಪಿ ಊದುವ ಮೂಲಕ ಜನರಿಗೆ ತೊಂದರೆ ಮಾಡುತ್ತಿದ್ದ ಯುವಕನ ಕಿವಿಗೆ ಪೊಲೀಸ್ ಪೀಪಿ ಊದಿ ಆ ತೊಂದರೆಯ ಅನುಭವ ಮಾಡಿಸಿದ್ದಾರೆ.