ಲಕ್ನೋದಲ್ಲಿ ವ್ಯಕ್ತಿಯೊಬ್ಬರು ರಸ್ತೆ ಬದಿಯ ಗೋಡೆಯಲ್ಲಿದ್ದ ಶಿವ ದೇವರ ಪೇಂಟಿಂಗ್ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ದಾರಿಹೋಕರೊಬ್ಬರು ಈ ದೃಶ್ಯವನ್ನು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಆ ವ್ಯಕ್ತಿ ಗೊತ್ತಿದ್ದೂ ಅಲ್ಲಿ ಮೂತ್ರ ಮಾಡಿದ್ದಾರಾ ಅಥವಾ ಗೊತ್ತಿಲ್ಲದೆ ಈ ರೀತಿ ಮಾಡಿದ್ದಾರೋ ಗೊತ್ತಿಲ್ಲ. ಆದರೆ, ಈ ವಿಡಿಯೋಗೆ ಹಿಂದೂಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.