ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (SUDA) ನೂತನ ಅಧ್ಯಕ್ಷರಾಗಿ ಮಧುಸೂದನ್ ಅವರನ್ನು ಕರ್ನಾಟಕ ಸರ್ಕಾರ ನೇಮಿಸಿದೆ. ಎನ್ಎಸ್ಯುಐ ಹಾಗೂ ಯುವ ಕಾಂಗ್ರೆಸ್ನಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಮಧುಸೂದನ್ ಅವರಿಗೆ ಈ ಪ್ರಮುಖ ಹುದ್ದೆಯ ಜವಾಬ್ದಾರಿಯನ್ನು ವಹಿಸಲಾಗಿದ್ದು, ಆದೇಶ ಹೊರಡಿಸಲಾಗಿದೆ.