ಮಡಿಕೇರಿ ತಾಲೂಕಿನ ಪೆರಾಜೆ ಸಮೀಪದ ಕಲ್ಲುಪರ್ಚೆ ಎಂಬಲ್ಲಿ ರಾತ್ರಿ ವೇಳೆ ಕಾಡಾನೆಯೊಂದು ಅಂದಾಜು 50 ಅಡಿ ಆಳದ ಬಾವಿಗೆ ಬಿದ್ದಿದ್ದು, ಸದ್ಯ ಸ್ಥಳಿಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಶುರುವಾಗಿದೆ. ಈಮಧ್ಯೆ, ಕಾಡಾನೆ ಬಾವಿಗೆ ಬಿದ್ದಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.