ಬೇಸಿಗೆಯಲ್ಲಿ ತ್ವರಿತವಾಗಿ ರುಚಿಕರವಾದ ಮಸಾಲಾ ಮಜ್ಜಿಗೆ ತಯಾರಿಸಲು ಒಂದು ಅದ್ಭುತ ಉಪಾಯ. ದಿನನಿತ್ಯ ಮಾಡುವ ಬದಲು ಈ ರೀತಿ ಮಾಡಿಟ್ಟುಕೊಂಡರೆ ಸುಲಭವಾಗಿ ಮಾಡಬಹುದಾಗಿದೆ. ಕೊತ್ತಂಬರಿ, ಪುದೀನಾ, ಹಸಿಮೆಣಸು, ಶುಂಠಿ ಮತ್ತು ಮಸಾಲೆಗಳನ್ನು ರುಬ್ಬಿ, ಐಸ್ ಟ್ರೇನಲ್ಲಿ ಘನೀಕರಿಸುವ ಮೂಲಕ (freeze) ಈ ಕ್ಯೂಬ್ಗಳನ್ನು ತಯಾರಿಸಲಾಗುತ್ತದೆ. 2- 3 ಕ್ಯೂಬ್ಗಳನ್ನು ತಣ್ಣನೆಯ ಮಜ್ಜಿಗೆ ಅಥವಾ ನೀರಿಗೆ ಹಾಕಿದರೆ, ಸೆಕೆಂಡುಗಳಲ್ಲಿ ರಿಫ್ರೆಶ್ ಪಾನೀಯ ಸಿದ್ಧವಾಗುತ್ತದೆ. ಹಾಗಿದ್ರೆ ಇನ್ನೇಕೆ ತಡ ನೀವು ಒಮ್ಮೆ ಟ್ರೈ ಮಾಡಿ ನೋಡಿ.