ಮಹಾರಾಷ್ಟ್ರದ ತೇಚಾ (Thecha) ಎಂಬುದು ಹಸಿರು/ ಕೆಂಪು ಮೆಣಸಿನಕಾಯಿ, ಬೆಳ್ಳುಳ್ಳಿ, ಶೇಂಗಾ ಮತ್ತು ಸಾಂಬಾರ ಪದಾರ್ಥಗಳನ್ನು ಬಳಸಿ ತಯಾರಿಸುವ ಅತ್ಯಂತ ಖಾರವಾದ ಮತ್ತು ಸಾಂಪ್ರದಾಯಿಕ ಚಟ್ನಿಯಾಗಿದೆ. ಪದಾರ್ಥಗಳನ್ನು ಎಣ್ಣೆಯಲ್ಲಿ ಹುರಿದು, ನಂತರ ಕೈಯಿಂದ ಕುಟ್ಟಿ ತಯಾರಿಸಲಾಗುತ್ತದೆ. ಇದನ್ನು ರೊಟ್ಟಿ, ಪಿಠ್ಲಾ, ಪರೋಟ ಅಥವಾ ಊಟದೊಂದಿಗೆ ಸೈಡ್ ಡಿಶ್ ಆಗಿ ಬಳಕೆ ಮಾಡಬಹುದು. ನಿಮಗೂ ಕೂಡ ಖಾರವಾದ ಚಟ್ನಿ ತಿನ್ನಬೇಕು ಅಂತಾ ಅನಿಸಿದಾಗ ಈ ಡಿಶ್ ಟ್ರೈ ಮಾಡಿ. ಇದನ್ನು mykitchenstory44 ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.