ಮಹಾಶಿವರಾತ್ರಿ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಕಾಲ್ನಡಿಗೆಯಲ್ಲಿ ಹೊರಟಿದ್ದಾರೆ. ನಿನ್ನೆಯಿಂದಲೇ ಆರಂಭವಾಗಿರುವ ಈ ಯಾತ್ರೆಯಲ್ಲಿ ಭಕ್ತರು ನಾಳೆ ಸಂಜೆಯವರೆಗೂ ಬೆಟ್ಟಕ್ಕೆ ತಲುಪಲಿದ್ದಾರೆ. ಶಿವರಾತ್ರಿ ಸಂಭ್ರಮವು ಮಲೆ ಮಹದೇಶ್ವರ ಬೆಟ್ಟದಲ್ಲಿ ಅದ್ಧೂರಿಯಾಗಿ ನಡೆಯಲಿದ್ದು, ಭಕ್ತರು ಶಿವನ ದರ್ಶನಕ್ಕೆ ಹರಿದುಬರುತ್ತಿದ್ದಾರೆ.