ಬಾಗಲಕೋಟೆ ಜಿಲ್ಲೆ ಇಳಕಲ್ ನಗರದ ಗ್ಯಾರೇಜ್ನಲ್ಲಿ ತಡರಾತ್ರಿ ಬೆಂಕಿ ಅವಘಡ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್ನಿಂದಾಗಿ ಕೃಷ್ಣಾ ವದ್ದಿ ಅವರಿಗೆ ಸೇರಿದ ಗ್ಯಾರೇಜ್ನಲ್ಲಿ 8ಕ್ಕೂ ಹೆಚ್ಚು ಬೈಕ್ಗಳು, ವಾಟರ್ ವಾಷ್ ಮಷಿನ್ ಭಸ್ಮವಾಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದು, ಭಾರಿ ಆಸ್ತಿ ನಷ್ಟ ಸಂಭವಿಸಿದೆ. ಘಟನೆ ಇಳಕಲ್ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.