ಮ್ಯಾಗಿ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಎಲ್ಲರೂ ಇಷ್ಟಪಟ್ಟು ತಿನ್ನುವ ಸ್ನಾಕ್ಸ್ ಗಳಲ್ಲಿ ಇದು ಒಂದು. ಆದರೆ ಇದನ್ನು ಒಂದೇ ರೀತಿ ಮಾಡಿ ತಿನ್ನಲು ಯಾರಿಗೂ ಇಷ್ಟವಾಗುವುದಿಲ್ಲ. ಹಾಗಾಗಿ ಚೀಸ್ ಮ್ಯಾಗಿಯನ್ನು ಒಮ್ಮೆ ಟ್ರೈ ಮಾಡಬಹುದು. ಅದರಲ್ಲಿಯೂ ಬಿಸಿಬಿಸಿಯಾಗಿ ಏನಾದರೂ ತಿನ್ನಬೇಕು ಅಂತ ಅನ್ನಿಸಿದಾಗ ಈ ಒಂದು ರೆಸಿಪಿಯನ್ನು ಟ್ರೈ ಮಾಡಲೇಬೇಕು. ಇದರ ರುಚಿ ಕೂಡ ತುಂಬಾ ಚೆನ್ನಾಗಿರುತ್ತೆ ಮಾತ್ರವಲ್ಲ ಬೇಗ ತಯಾರಾಗುತ್ತದೆ.