ಮೊಜಿತೋಗಳನ್ನು ದುಡ್ಡು ಕೊಟ್ಟು ಕರಿದಿಸುವ ಬದಲು ಮನೆಯಲ್ಲಿಯೇ ಸುಲಭವಾಗಿ ಮಾಡಬಹುದು. ಹೌದು, ಇದನ್ನು ಮನೆಯಲ್ಲಿ ಮಾಡುವುದು ಬಹಳ ಸುಲಭ. ಈ ರೆಸಿಪಿಯನ್ನು suparna_puneeth ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಈಜಿಯಾಗಿ ಮಾಡಿ ಕುಡಿಯಬಹುದು. ತಾಜಾ ಕಿತ್ತಳೆ ರಸ, ಪುದೀನಾ ಎಲೆಗಳು, ನಿಂಬೆ ರಸ, ಸಕ್ಕರೆ ಮತ್ತು ಸೋಡಾವನ್ನು ಬಳಸಿ ಸುಲಭವಾಗಿ ತಯಾರಿಸಬಹುದು. ಈ ಪಾನೀಯವು ವಿಟಮಿನ್ ಸಿ ಯಿಂದ ಸಮೃದ್ಧವಾಗಿದ್ದು, ಜೀರ್ಣಕ್ರಿಯೆಗೆ ಒಳ್ಳೆಯದು. 5-10 ನಿಮಿಷಗಳಲ್ಲಿ ತಯಾರಿಸಬಹುದಾದ ಈ ತಂಪಾದ ಪಾನೀಯವನ್ನು ಐಸ್ ಕ್ಯೂಬ್ಗಳೊಂದಿಗೆ ಸವಿಯಬಹುದು.