ಮನೆಯಲ್ಲಿಯೇ ರುಚಿಕರವಾಗಿ ಎನ್ನನಾದರೂ ಮಾಡಿ ತಿನ್ನಬೇಕು ಎಂದು ಬಯಸುವವರು ಈ ಆಲೂಗಡ್ಡೆ ಚಿಪ್ಸ್ ಮಾಡಿ ತಿನ್ನಬಹುದು. ಇದು ಮಾಮೂಲಿ ಚಿಪ್ಸ್ ಮಾಡುವ ವಿಧಾನವಲ್ಲ. ಇದೊಂದು ಹೊಸ ವಿಧಾನ. ಅಷ್ಟೇ ಅಲ್ಲ, ಇದನ್ನು ಸಿಂಪಲ್ ಆಗಿ ಮಾಡಿ ಸವಿಯಬಹುದು. ಈ ರೆಸಿಪಿಯನ್ನು jahan_ki_recipes_ ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಮನೆಯಲ್ಲಿಯೇ ಕೆಲವೇ ಕೆಲವು ವಸ್ತುಗಳನ್ನು ಬಳಕೆ ಮಾಡಿ ಮಾಡಬಹುದಾಗಿದೆ. ನಿಮಗೂ ಆಲೂಗಡ್ಡೆ ಇಷ್ಟ ಆಗಿದ್ದರೆ ಈ ರೆಸಿಪಿಯನ್ನು ತಪ್ಪದೆ ಟ್ರೈ ಮಾಡಿ ನೋಡಿ. ಮನೆಯವರೆಲ್ಲಾ ಇಷ್ಟಪಟ್ಟು ತಿನ್ನುವುದರಲ್ಲಿ ಸಂಶಯವೇ ಇಲ್ಲ.