ಸಂಜೆ ಬಂದು ಏನಾದರೂ ತಿನ್ನಬೇಕು ಎನಿಸಿದರೆ ಈ ಒಂದು ರೆಸಿಪಿಯನ್ನು ಟ್ರೈ ಮಾಡಲೇಬೇಕು. ಹೌದು ಇದು ಆರೋಗ್ಯಕ್ಕೂ ಒಳ್ಳೆಯದು. ಅಷ್ಟೇ ಅಲ್ಲ ಮಾಡುವುದಕ್ಕೂ ಸುಲಭ. ಅಷ್ಟು ಮಾತ್ರವಲ್ಲ, ಮಕ್ಕಳಿಗೆ ರುಚಿ ರುಚಿಯಾಗಿ ಏನಾದರೂ ಹೊಸ ರೀತಿಯ ರೆಸಿಪಿ ಮಾಡಿಕೊಡಬೇಕು ಎಂದರೆ ಇದರಷ್ಟು ಒಳ್ಳೆಯ ರೆಸಿಪಿ ಮತ್ತೊಂದಿಲ್ಲ. ಈ ರೆಸಿಪಿಯನ್ನು pawar_omkar ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದನ್ನು ಮಾಡಿ ಸವಿಯುವುದರಿಂದ ತರಕಾರಿ ಕೂಡ ಹೊಟ್ಟೆಗೆ ಹೋಗುತ್ತದೆ. ಮಕ್ಕಳು ತರಕಾರಿ ತಿನ್ನಲು ಹಿಂದೆ ಮುಂದೆ ನೋಡುತ್ತಿದ್ದರೆ ಈ ರೆಸಿಪಿಯನ್ನು ಮಾಡಿ ಬಡಿಸಿ.