ಬೆಳಗಾವಿ ಜಿಲ್ಲೆ ರಾಮದುರ್ಗ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾದ ಕಾರಣ ಮಲಪ್ರಭಾ ನದಿಗೆ ಅಪಾರ ಪ್ರಮಾಣದ ನೀರು ಹರಿದುಬಂದಿದ್ದು, ಜೀವಕಳೆ ಬಂದಿದೆ. ಖಾಲಿ ಖಾಲಿಯಾಗಿದ್ದ ಮಲಪ್ರಭಾ ನದಿ ಇದೀಗ ಮೈದುಂಬಿ ಹರಿಯುತ್ತಿದೆ. ಇದರಿಂದ ಮಲಪ್ರಭಾ ನದಿ ತೀರದ ರೈತರಲ್ಲಿ ಬಾರಿ ಸಂತಸ ಮೂಡಿದೆ. ಕುಳಗೇರಿ ಕ್ರಾಸ್ ವ್ಯಾಪ್ತಿಯಲ್ಲಿ ನದಿ ಮೈದುಂಬಿ ಹರಿಯುತ್ತಿರುವ ವಿಡಿಯೋ ಇಲ್ಲಿದೆ.